GoKrupamrutha - ಗೋಕೃಪಾಮೃತ
ಕೃಷಿ, ಭಾರತದ ಮುಖ್ಯ ಕಸುಬು. ಭಾರತದ ಶೇ 70 ರಷ್ಟು ಜನ ಕೃಷಿ ಮೇಲೆಯೇ ಅವಲಂಬಿತವಾಗಿದೆ. ಹಾಗೆಯೇ ರೈತ ನಮ್ಮ ದೇಶದ ಬೆನ್ನೆಲುಬು ಕೂಡ. ಆದರೆ 1960 ರ ಹಸಿರು ಕ್ರಾಂತಿಯ ಪ್ರಭಾವದಿಂದ ಇಂದು ಕೃಷಿ ಅವನತಿಯ ದಾರಿಯತ್ತ ಸಾಗುತ್ತಿದ್ದು, ಕೃಷಿ ಅತ್ಯಂತ ನಷ್ಟಕರ ಎಂಬ ಭಾವನೆಗೆ ಬರಬೇಕಾಗಿದೆ. ಇದಕ್ಕೆ ಮುಖ್ಯ ಕಾರಣ ರೈತರು ತಮ್ಮ ಕೃಷಿ ಕಾರ್ಯಕ್ಕಾಗಿ ಬೇರೆಯವರನ್ನು ಅವಲಂಬಿಸಿರುವುದು. ಇಂದು ರೈತ ಪ್ರತಿಯೊಂದನ್ನು ಹೊರಗಡೆಯಿಂದ ತಂದು ತನ್ನ ಕೃಷಿ ಕಾರ್ಯ ಮಾಡುತ್ತಿದ್ದಾನೆ, ಇದರಿಂದ ಅವನಿಗೆ ಕೃಷಿ ಒಂದು ನಷ್ಟದಾಯಕ ಕಾಯಕವಾಗಿದೆ.
ನಮ್ಮ ಪೂರ್ವಿಕರು ಕೃಷಿಯನ್ನು ಒಂದು ತಪಸ್ಸಿನಂತೆ ಪಾಲಿಸುತ್ತಿದ್ದರು ಹಾಗೂ ಎಲ್ಲಾ ಒಳಸುರಿಗಳನ್ನು ತಾವೆ ತಯಾರಿಸಿಕೊಳ್ಳುತ್ತಿದ್ದರು. ನಮ್ಮ ಪೂರ್ವಿಕರು ಗೋಮಾತೆ ಹಾಗೂ ಅದರ ಉತ್ಪನ್ನಗಳನ್ನು ಬಳಸಿ, ಕೃಷಿ ಮಾಡುತ್ತಿದ್ದರು ಮತ್ತು ಅದರಲ್ಲಿ ಸಂತೋಷವನ್ನು ಕಾಣುತ್ತಿದ್ದರು.
1960 ರಿಂದ ನಾವುಗಳು ಭೂಮಾತೆಯನ್ನು ವಿಷಗಳಿಂದ ಕಲ್ಮಶ ಮಾಡಿ ಅವಳ ಆರೋಗ್ಯವನ್ನು ಹಾಳು ಮಾಡಿದ್ದೇವೆ. ಈಗ ನಮ್ಮೆಲ್ಲರ ಆದ್ಯ ಕರ್ತವ್ಯ ಏನೆಂದರೆ, ಮತ್ತೆ ಭೂಮಾತೆಯನ್ನು ವಿಷಮುಕ್ತ ಮಾಡುವುದು. ಇದಕ್ಕೆ ಈಗ ಇರುವುದು ಗೋವು ಆದಾರಿತ ಕೃಷಿ, ಜೀವಾಮೃತ, ಬೀಜಾಮೃತ ಹಾಗೂ ಇನ್ನಿತರ ಗೋವು ಆದಾರಿತ ಒಳಸುರಿಗಳು. ಇದೇ ಗೋವು ಆದಾರಿತವಾಗಿ ಬಂದಿರುವ ಅಮೃತಾನೆ “ಗೋಕೃಪಾಮೃತ”!!!!!
ಕನೇರಿ ಸಿದ್ದಗಿರಿ ಮಠದ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಮಹಾಸ್ವಾಮಿಗಳು ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಇದೊಂದು ಆಂದೋಲನದ ರೀತಿಯಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಮಠದ ವತಿಯಿಂದ ಕೂಡ ರೈತರಿಗೆ ಉಚಿತವಾಗಿ ಜಲವನ್ನು ವಿತರಣೆ ಮಾಡುತ್ತಿದ್ದ, ಈಗಾಗಲೇ ಅನೇಕ ರೈತರು ಇದರ ಸದುಪಯೋಗ ಪಡೆದುಕೊಂಡಿದ್ದಾರೆ.
ಕರ್ನಾಟಕದಲ್ಲಿ ಗೋಕೃಪಾಮೃತವನ್ನು ಉಚಿತವಾಗಿ ರೈತರಿಗೆ ನೀಡುತ್ತಾ, ಜನಪರ ಕಾಳಜಿಯುಳ್ಳ ಅನೇಕ ಪ್ರಗತಿಪರ ಚಿಂತಕರು ಹಾಗೂ ರೈತರು ಸಾಮಾಜಿಕ ಜಾಲತಾಣ ಹಾಗೂ ಇನ್ನಿತರ ಮಾದ್ಯಮಗಳ ಮೂಲಕ ಪ್ರಚಾರ ಮಾಡುತ್ತಿದ್ದಾರೆ. ಹಾಗೆಯೇ ಜಿಲ್ಲಾವಾರು ರೈತರ ಮಾಹಿತಿಯನ್ನು ಕೂಡ ಸಂಗ್ರಹಿಸಿ, ನೈಸರ್ಗಿಕ ಕೃಷಿಯಲ್ಲಿ ಆಸಕ್ತಿ ಇರುವ ರೈತರಿಗೆ ತ್ವರಿತವಾಗಿ ಕೃಪಾಮೃತ ದೊರೆಯುವಂತೆ ಕಾಳಜಿ ವಹಿಸುತ್ತಿದ್ದಾರೆ. ಒಟ್ಟಾರೆ ಇದೊಂದು ವಿಷಮುಕ್ತ ಕೃಷಿಯ ಕ್ರಾಂತಿಯ ರೀತಿ ಹೆಚ್ಚು ಹೆಚ್ಚು ಪ್ರಚಲಿತವಾಗುತ್ತಿದೆ.
ಗೋಕೃಪಾಮೃತವನ್ನು ತಯಾರಿಸುವ ವಿಧಾನ:-
ಗೋಕೃಪಾಮೃತವನ್ನು ತಯಾರಿಸುವುದು ಅತೀ ಸರಳ ಹಾಗೂ ಸುಲಭ. ಇದಕ್ಕೆ ಬೇಕಾಗಿರುವ ಪಧಾರ್ಥಗಳು,
- 1 ಲೀಟರ್ ಗೋಕೃಪಾಮೃತ
- 2 ಕೆ ಜಿ ಸಾವಯವ ಬೆಲ್ಲ
- 2 ಲೀಟರ್ ದೇಶೀ ಆಕಳ ಮಜ್ಜಿಗೆ (ಒಂದರಿಂದ ಮೂರು ದಿನದ ಮಜ್ಜಿಗೆ)
200 ಲೀಟರ್ ಡ್ರಮ್ ನಲ್ಲಿ ಸ್ವಚ್ಚವಾದ ನೀರನ್ನು ತುಂಬಿ, ಅದಕ್ಕೆ ಬೆಲ್ಲ ಮತ್ತು ಮಜ್ಜಿಗೆಯನ್ನು ಸೇರಿಸಬೇಕು, ನಂತರ ಬೇರೆ ರೈತರಿಂದ ತೆಗೆದುಕೊಂಡು ಬಂದ ಕೃಪಾಮೃತವನ್ನು ಇದಕ್ಕೆ ಸೇರಿಸಬೇಕು, ನಂತರ ಒಂದು ತೆಳುವಾದ ಬಟ್ಟೆಯಿಂದ ಡ್ರಮ್ ಮುಚ್ಚಬೇಕು. ಈ ಮಿಶ್ರಣವನ್ನು ಪ್ರತಿದಿನ ಎರಡರಿಂದ ಮೂರು ಬಾರಿ ಒಂದು ಕೋಲಿನಿಂದ ಪ್ರಧಕ್ಷೀಣಾಕಾರವಾಗಿ ತಿರುಗಿಸಬೇಕು. ಈ ರೀತಿ ತಿರುಗಿಸಿದ ಮಿಶ್ರಣ 5 ರಿಂದ 6ನೇ ದಿನಕ್ಕೆ ಬಳಸಲು ಸಿದ್ದವಾಗುತ್ತದೆ.
ಗೋಕೃಪಾಮೃತವನ್ನು ಬಳಸುವ ವಿಧಾನ:- ಮೇಲಿನ ರೀತಿಯಲ್ಲಿ ತಯಾರಿಸಿದ ಕೃಪಾಮೃತವನ್ನು ಒಂದು ಎಕರೆಗೆ 1000 ಲೀಟರ್ ನ್ನು ನೀರಿನ ಮುಖಾಂತರ ಅಥವಾ ಡ್ರಿಪ್ ಮುಖಾಂತರ ಮೊದಲಬಾರಿ ಕೊಡಬೇಕು. ನಂತರ 500 ಲೀಟರ್ ನಂತೆ ಪ್ರತಿಬಾರಿ ನೀರು ಕೊಟುವಾಗ ಕೊಟ್ಟರೆ ಉತ್ತಮ ಪಲಿತಾಂಶವನ್ನು ಪಡೆಯಬಹುದು. ಸಿಂಪಡಣೆಗೆ 2 ರಿಂದ 3 ಲೀಟರ್ ಕೃಪಾಮೃತವನ್ನು ಪ್ರತಿ ಕ್ಯಾನಿಗೆ ಸೇರಿಸಬೇಕು.
ಕೀಟಬಾದೆಗೆ ಗೋಕೃಪಾಮೃತ ಅತ್ಯುತ್ತಮ ಪರಿಹಾರವನ್ನು ನೀಡುತ್ತದೆ. ಹುಳಿ ಮಜ್ಜಿಗೆಯಲ್ಲಿ ತಾಮ್ರದ ಚೂರನ್ನು ಹಾಕಿ, 45 ದಿನಗಳ ಕಾಲ ನೆರಳಿನಲ್ಲಿ ಗಾಡಿ ಆಡುವ ರೀತಿಯಲ್ಲಿ ಇಡಬೇಕು, ಈ ತಾಮ್ರ ಮಿಶ್ರಿತ 2 ಲೀಟರ್ ಮಜ್ಜಿಗೆಯನ್ನು, 2 ಲೀಟರ್ ಗೋಕೃಪಾಮೃತ ಜಲ ಮತ್ತು 2 ಲೀಟರ್ ತಾಜಾ ಗೋ ಮೂತ್ರವನ್ನು ಸೇರಿಸಿ ಸಿಂಪಡಣೆ ಮಾಡಿದರೆ ಹತೋಟಿಗೆ ಬರುತ್ತದೆ.
ಗೋಕೃಪಾಮೃತದಲ್ಲಿ ಇರುವ ಉಪಯುಕ್ತ ಸೂಕ್ಷ್ಮಾಣು ಜೀವಿಗಳು
1)ಸಾರಜನಕವನ್ನು ಸ್ಥಿರೀಕರಿಸುವ ಸೂಕ್ಷ್ಮ ಜೀವಿಗಳಾದ
* ಅಜಟೋಬ್ಯಾಕ್ಟರ್
* ನೈಟ್ರೋ ಸಾರ್ಷಿಯಂ
* ಜಿಯೋ ಬ್ಯಾಸಿಲಸ್
* ಅನೆರೋಮೈಕ್ಸೋ ಬ್ಯಾಕ್ಟರ್ ಬ್ರೆವುಂಡಿಮೊನಾಸ್
*ಎಕ್ಟೋತಿಯೋರ್ಹೋಡೋಸ್ಟೊರಾ
* ಪ್ಲೆಕ್ಸಿರ್ಥಿಕ್ಸ್
* ಜಾಂಥಿನೋಬ್ಯಾಕ್ಟೀರಿಯಂ ಕ್ಸೆಬ್ಸಿಲ್ಲಾ
* ಮೈಕ್ರೋಕೋಕಸ್ ಮೈಕ್ರೊವಿರ್ಗಾ
* ನೋವಿಹೆರ್ಬಾಸ್ಪಿರಿಲ್ಲಂ ಪ್ಯಾರಾಕೋಕಸ್
* ರೋಡೋಕೋಕಸ್
2) ರಂಜಕವನ್ನು ಕರಗಿಸಿ ಸ್ಥಿರೀಕರಿಸುವ ಸೂಕ್ಷ್ಮಜೀವಿಗಳಾದ
* ಬ್ಯಾಕ್ಟೀರಿಯಂ
* ಪ್ಯಾಂಟೋವಾ ಅಗ್ಲೋಮರೆನ್ಸ್
* ಸುಡೋಮೊನಾಸ್
3)ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವ ಸೂಕ್ಷ್ಮಜೀವಿಗಳು
* ಅಸಿನೋಬ್ಯಾಕ್ಟರ್
* ಪ್ರೊಪಿನೋ ಬ್ಯಾಕ್ಟರ್
* ಸಿಟ್ರೋಬ್ಯಾಕ್ಟರ್
* ಬೊಸಿಯೊಂಗಿಕೋಲಾ ಕ್ಯಾಲ್ಡಿಮೋನಾಸ್
* ಮ್ಯಾಸಿಲಿಯಾ ಪಾರ್ವಿಬ್ಯಾಕುಲಂ
* ಸ್ಟ್ಯಾಪಿಲೋಕೋಕಸ್
ಮಣ್ಣಿನ ಮೂಲಕ ಹರಡುವ ಶಿಲೀಂಧ್ರ ಸಂಬಂಧಿತ ರೋಗಗಳನ್ನು ನಿಯಂತ್ರಿಸುವ ಸೂಕ್ಷ್ಮಜೀವಿಗಳಾದ
* ಸುಡೋಮೊನಾಸ್
* ಅಕ್ವಬ್ಯಾಕ್ಟೀರಿಯಂ
* ಪ್ಲೆಕ್ಸಿಥ್ರಿಕ್ಸ್
ಬೆಳೆಗಳ ಬೆಳವಣಿಗೆಗೆ ಪೂರಕವಾದ ಸೂಕ್ಷ್ಮಜೀವಿಗಳಾದ
* ಸಿಟ್ರೊˌಬ್ಯಾಕ್ಟರ್
* ಎಂಟಿರೋಕೋಕಸ್
* ಸ್ಪೈನಟ್ರೋಮೊನಾಸ್
* ಜಿಯೋ ಬ್ಯಾಸಿಲಸ್
* ಬ್ಯಾಸಿಲಸ್ ಬ್ರೆವುಂಡಿಮೊನಾಸ್
* ಕೌಲೋಬ್ಯಾಕ್ಟರ್
* ಸಿಟ್ರೋಬ್ಯಾಕ್ಟರ್
* ಎಂಟರೋಬ್ಯಾಕ್ಟಸ್ ಎಂಟರೋಕೋಕರ್
* ಎಸ್ಟೆರಿಚಿಯಾ ಜಿಯೋ ಬ್ಯಾಸಿಲಸ್
* ಒಕ್ರೊಬ್ಯಾಕ್ಟಮ್
* ಸುಡೋಮೊನಾಸ್ ಸೆರಾಟಿಯಾ
* ಸ್ಟೆನೋಟ್ರೊಪೋಮೊನಾಸ್
ಮೇಲ್ಕಂಡ ಎಲ್ಲಾ ಜಾತಿಯ ಉಪಯುಕ್ತ ಸೂಕ್ಷ್ಮಜೀವಿಗಳು ಈ ದ್ರಾವಣದಲ್ಲಿವೆ.
* ಸ್ಟೆನೋಟ್ರೊಪೋಮೊನಾಸ್
ಮೇಲ್ಕಂಡ ಎಲ್ಲಾ ಜಾತಿಯ ಉಪಯುಕ್ತ ಸೂಕ್ಷ್ಮಜೀವಿಗಳು ಈ ದ್ರಾವಣದಲ್ಲಿವೆ.
ಗೋಕೃಪಾಮೃತ ದೊರೆಯುವ ಸ್ಥಳ:-
ನೈಸರ್ಗಿಕ ಕೃಷಿ ಮಾಡಬಹಿಸುವ ರೈತರು ಗುಜರಾತಿನ ಬನ್ಸಿ ಗೋಶಾಲೆಯಿಂದ ಪಡೆಯಬಹುದು ಮತ್ತು ಕನೇರಿ ಸಿದ್ದಗಿರಿ ಮಠದಲ್ಲಿ ಕೂಡ ಪಡೆಯಬಹುದು. ಈಗಾಗಲೇ ಸುಮಾರು ರೈತರು ಬಳಸಿ, ಜೊತೆಗೆ ಸಾವಿರಾರು ರೈತರಿಗೆ ಉಚಿತವಾಗಿ ನೀಡುತ್ತಿದ್ದಾರೆ. ಕರ್ನಾಟಕದಲ್ಲಿ ಹೆಚ್ಚಿನ ಮಾಹಿತಿಗಾಗಿ ಶ್ರೀಮಾನ್ ರಾಜೇಶ್ವರ್ ರಾವ್ (9449596039) ಮತ್ತು ಶ್ರೀಮಾನ್ ಎಂ.ಡಿ. ಪ್ರಧಾನಿ (8095289464) ಇವರನ್ನು ಸಂಪರ್ಕಮಾಡಿ,
ಇದರ ಜೊತೆಗೆ ಗೋಕೃಪಾಮೃತ ದೊರೆಯುವ ರೈತರ ವಿಳಾಸ ಈ ಕೆಳಗೆ ನೀಡಲಾಗಿದೆ,

